6,49 €
6,49 €
inkl. MwSt.
Sofort per Download lieferbar
payback
3 °P sammeln
6,49 €
6,49 €
inkl. MwSt.
Sofort per Download lieferbar

Alle Infos zum verschenken
payback
3 °P sammeln
Als Download kaufen
6,49 €
inkl. MwSt.
Sofort per Download lieferbar
payback
3 °P sammeln
Jetzt verschenken
6,49 €
inkl. MwSt.
Sofort per Download lieferbar

Alle Infos zum verschenken
payback
3 °P sammeln
  • Hörbuch-Download MP3

ಜಗದ ಮೋಹವನ್ನು ಹಲವು ಕತೆಗಾರರು ಬರೆದಿದ್ದಾರೆ. ಆದರೆ ಕ೦ನಾಡಿಗಾ ನಾರಾಯಣ ಅವರು "ಇಹದ ಪರಿಮಳವನ್ನು" ತಮ್ಮ ಕತೆಗಳಲ್ಲಿ ಹೊತ್ತು ತಂದಿದ್ದಾರೆ. ಬೆನ್ನುಡಿಯಲ್ಲಿ ಹೇಳುವಂತೆ ಈ ಸ೦ಕಲನದಲ್ಲಿರುವ ಪ್ರತಿ ಕತೆಗಳೂ ಪರಿಮಳವನ್ನು ಅರಸುತ್ತಾ ಸಾಗುತ್ತವೆ. ಸಾಧಾರಣವಾಗಿ ಬದುಕಿನ 'ವಾಸನೆ'ಗಳ ಕುರಿತಂತೆ ಬರೆದವರಿದ್ದಾರೆ. ಕಾಮ, ಪ್ರೇಮ, ಲೋಲುಪತೆ, ಬೆವರು ಇವುಗಳನ್ನು ನವ್ಯ ಸಾಹಿತ್ಯ ದಟ್ಟವಾಗಿ ಕಟ್ಟಿಕೊಟ್ಟಿದೆ. ಆದರೆ ಕಂನಾಡಿಗರದು ಪರಿಮಳದ ಸೆಳೆತವನ್ನು ಮನುಷ್ಯನೊಳಗೆ ಮಾನವೀಯ ನೆಲೆಯಲ್ಲಿ ಕಾಣುತ್ತಾರೆ. ಈ ಸ೦ಕಲನದಲ್ಲಿ ಒಟ್ಟು 13 ಕತೆಗಳು ಇವೆ. ತನ್ನ ಸುತ್ತಮುತ್ತಲಿನ ಕೃತಕ ಬಂಧಗಳನ್ನು ಮೀರಿ ಮಣ್ಣಿನ ಪರಿಮಳಕ್ಕೆ ಸೋಲುವ ನಾಯಕನ ಕತೆಯನ್ನು ಇಹದ ಪರಿಮಳ ಹೇಳುತ್ತದೆ. ಆ ಪರಿಮಳವನ್ನು ದೂರದಿಂದ ಆಸ್ವಾದಿಸುವುದೇನೋ ಚೆನ್ನಾಗಿಯೇ ಇರುತ್ತದೆ ಆದರೆ ಆ…mehr

  • Format: mp3
  • Größe: 207MB
  • FamilySharing(5)
Produktbeschreibung
ಜಗದ ಮೋಹವನ್ನು ಹಲವು ಕತೆಗಾರರು ಬರೆದಿದ್ದಾರೆ. ಆದರೆ ಕ೦ನಾಡಿಗಾ ನಾರಾಯಣ ಅವರು "ಇಹದ ಪರಿಮಳವನ್ನು" ತಮ್ಮ ಕತೆಗಳಲ್ಲಿ ಹೊತ್ತು ತಂದಿದ್ದಾರೆ. ಬೆನ್ನುಡಿಯಲ್ಲಿ ಹೇಳುವಂತೆ ಈ ಸ೦ಕಲನದಲ್ಲಿರುವ ಪ್ರತಿ ಕತೆಗಳೂ ಪರಿಮಳವನ್ನು ಅರಸುತ್ತಾ ಸಾಗುತ್ತವೆ. ಸಾಧಾರಣವಾಗಿ ಬದುಕಿನ 'ವಾಸನೆ'ಗಳ ಕುರಿತಂತೆ ಬರೆದವರಿದ್ದಾರೆ. ಕಾಮ, ಪ್ರೇಮ, ಲೋಲುಪತೆ, ಬೆವರು ಇವುಗಳನ್ನು ನವ್ಯ ಸಾಹಿತ್ಯ ದಟ್ಟವಾಗಿ ಕಟ್ಟಿಕೊಟ್ಟಿದೆ. ಆದರೆ ಕಂನಾಡಿಗರದು ಪರಿಮಳದ ಸೆಳೆತವನ್ನು ಮನುಷ್ಯನೊಳಗೆ ಮಾನವೀಯ ನೆಲೆಯಲ್ಲಿ ಕಾಣುತ್ತಾರೆ. ಈ ಸ೦ಕಲನದಲ್ಲಿ ಒಟ್ಟು 13 ಕತೆಗಳು ಇವೆ. ತನ್ನ ಸುತ್ತಮುತ್ತಲಿನ ಕೃತಕ ಬಂಧಗಳನ್ನು ಮೀರಿ ಮಣ್ಣಿನ ಪರಿಮಳಕ್ಕೆ ಸೋಲುವ ನಾಯಕನ ಕತೆಯನ್ನು ಇಹದ ಪರಿಮಳ ಹೇಳುತ್ತದೆ. ಆ ಪರಿಮಳವನ್ನು ದೂರದಿಂದ ಆಸ್ವಾದಿಸುವುದೇನೋ ಚೆನ್ನಾಗಿಯೇ ಇರುತ್ತದೆ ಆದರೆ ಆ ಪರಿಮಳಕ್ಕಾಗಿ ತೆರಬೇಕಾದ ಭೌತಿಕ ಬದುತನ್ನು ಮೀರುವುದು ಕಷ್ಟ. ಇದು. ಕಥಾನಾಯಕ ಅಮೋಘವರ್ಷನ ಒಳಗಿನ ಸಂಘರ್ಷ. ಒಬ್ಬ ನಟ ಬದುಕಿನ ವೌಲ್ಯಗಳನ್ನು ಅದ್ಭುತವಾಗಿ ನಟಿಸಬಲ್ಲ. ಆದರೆ ಅದನ್ನು ತನ್ನ ಬದುಕಾಗಿಸುವ ಸ೦ದರ್ಭದಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಇದೇ ಸ೦ದರ್ಭದಲ್ಲಿ "ಗ೦ಧದ ಬಾಗಿಲು' ಇನ್ನೊ೦ದು ರೀತಿಯಲ್ಲಿ ಮನುಷ್ಯನೊಳಗಿನ ಒಳ ಹೊರಗಿನ ವಾಸನೆಯನ್ನು ತಿಳಿಸುತ್ತದೆ. ಒಂದು ದ್ವೇಷ, ಅಸೂಯೆಯಿಂದ ಕರಟಿದ ಪರಿಮಳ. ಇದೇ ಸ೦ದರ್ಭದಲ್ಲಿ ಅದರ ಬಾಗಿಲು ಮಾತ್ರ ಗಂಧದ ಪರಿಮಳ ಸೂಸುತ್ತದೆ. ಹೀಗೆ ಭಂಗಿಗಿರಿ, ಮಳೆ ಬೇರೆ ಬೇರೆ ರೀತಿಯಲ್ಲಿ ಇಹದ ವಾಸನೆಗಳ ವೈವಿಧ್ಯಗಳ ಸುತ್ತ ಸುತ್ತುತ್ತವೆ. ಉಳಿದಂತೆ ಕತೆಗಳು ಮನುಷ್ಯನೊಳಗಿನ ನೀಚತನ ಮತ್ತು ಒಳ್ಳೆಯತನಗಳ ತಿಕ್ಕಾಟಗಳನ್ನು ಹೇಳುತ್ತವೆ. ಕಂನಾಡಿಗಾ ಅವರ ಕತೆ ಹೇಳುವ ರೀತಿ, ಪರಿಮಳವನ್ನು ಪರಿಣಾಮಕಾರಿಯಾಗಿ ಹಿಡಿದಿಡುತ್ತದೆ. ಮುನ್ನುಡಿಯಲ್ಲಿ ರಘುನಾಥ ಚ.ಹ. ಅವರು ಹೇಳುವ೦ತೆ ಕ೦ನಾಡಿಗಾ ಅವರು ಕಥೆಯೊಂದನ್ನು ನಿರೂಪಿಸುವ ಹೊತ್ತಿಗೆ ಅದರಾಚೆಗಿನ ಬೇರೊ೦ದು ಕಥನವನ್ನು ಕಾಣಿಸುವ ಮೂಲಕ ಬೆರಗು ಮೂಡಿಸುತ್ತಾರೆ. ನಾವು ಕ೦ಡ ಬದುಕನ್ನು ಮತ್ತೊ೦ದು ಕೋನದಲ್ಲಿ ನೋಡಲು ಒತ್ತಾಯಿಸುತ್ತಾರೆ.

Dieser Download kann aus rechtlichen Gründen nur mit Rechnungsadresse in A, D ausgeliefert werden.