ಇನ್ನೂ ಒಂದು ಕಾದಂಬರಿಯ ವೈಶಿಷ್ಟ್ಯ ಹಲವು ರೀತಿಯದು. ಹೊಸ ಕಥಾ ವಸ್ತು, ಹೊಸ ಕಥನವಿಧಾನ, ಲೇಖಕರ ವಿಶ್ಲೇಷಣಾ ಸಾಮರ್ಥ್ಯ - ಎಲ್ಲವೂ ಇದನ್ನೊಂದು ಮುಂಚೂಣಿಯ ಕೃತಿಯನ್ನಾಗಿ ಮಾಡಿವೆ. ಪ್ರತಿಯೊಂದು ಪ್ರಬುದ್ಧ ಕೃತಿಯೂ ತನ್ನ ಶೈಲಿಯನ್ನು ವಸ್ತುವಿನ ಜತೆ ಸಮನ್ವಯಗೊಳಿಸುವುದರ ಮೂಲಕ ಕಲಾತ್ಮಕವಾಗುತ್ತದೆ. ಇದನ್ನೇ ಸಾಮಾನ್ಯವಾದ ಭಾಷೆಯಲ್ಲಿ ಕಥನಕಲೆಯೆಂದು ಹೇಳುವುದು. ವಿವೇಕ ಶಾನಭಾಗರಿಗೆ ಇದು ಆರಂಭದ ಕಾದಂಬರಿಯಲ್ಲೇ ಸಿದ್ಧಿಸಿರುವುದು ಮಹತ್ವದ ಸಂಗತಿ. ಅವರು ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನು ಮತ್ತು ವಿಚಾರಗಳನ್ನು ತಮ್ಮ ಕಥನಕ್ಕೆ ಒಳಪಡಿಸುವ ಬಗೆ ಅನನ್ಯವಾದುದೇ ಸರಿ. - ಕೆ.ವಿ. ತಿರುಮಲೇಶ್
Dieser Download kann aus rechtlichen Gründen nur mit Rechnungsadresse in A, D ausgeliefert werden.