ದೇವದಾಸಿಯಂತಹ ಮೌಢ್ಯ ಹಾಗೂ ಅನಿಷ್ಟ ಪದ್ಧತಿಯ ಸುತ್ತ ಈ ಕಾದಂಬರಿಯನ್ನು ಹೆಣೆಯಲಾಗಿದೆ. ಗೌರಿ ಎನ್ನುವ ಸುಂದರ ಹುಡುಗಿ ಹಳ್ಳಿಯ ಗೌಡನ ಕಾಮದ ಕಣ್ಣಿಗೆ ಬೀಳುತ್ತಾಳೆ. ದೇವಸ್ಥಾನದ ಪೂಜಾರಿಗೆ ಎಲ್ಲಮ್ಮ ದೇವರು ಮೈಮೇಲೆ ಬಂದು ಗೌರಿ ದೇವರಿಗೆ ಮೀಸಲು ಎಂದು ಭವಿಷ್ಯ ನುಡಿಯುತ್ತಾನೆ. ಆಗ ಶುರುವಾಗುತ್ತದೆ ಈ ಅನಿಷ್ಟ ಪದ್ಧತಿಯಿಂದ ತಪ್ಪಿಸಿಕೊಳ್ಳಲು ಗೌರಿ ಮತ್ತು ಆಕೆಯ ಮನೆಯವರ ಓಟ. ಆ ಓಟದಲ್ಲಿ, ಹೋರಾಟದಲ್ಲಿ ಆಕೆಯ ತಂದೆತಾಯಿಯನ್ನು ಸಾಯಿಸಿ, ಇದ್ದೊಬ್ಬ ಅಣ್ಣನನ್ನು ದೂರ ಮಾಡಿ ಆಕೆಯನ್ನು ಮತ್ತೆ ಹಳ್ಳಿಗೆ ಕರೆತರಲಾಗುತ್ತದೆ. ಹೀಗೆ ದೇವದಾಸಿ ಪದ್ಧತಿ ಹೆಸರಲ್ಲಿ ನಡೆಯುತ್ತಿದ್ದ ದೌರ್ಜನ್ಯವನ್ನು ಎಳೆಎಳೆಯಾಗಿ ಬಿಡಿಸಿಡುವ ಪ್ರಯತ್ನ ಮಾಡಿದ್ದಾರೆ ಲೇಖಕರು.
Dieser Download kann aus rechtlichen Gründen nur mit Rechnungsadresse in A, D ausgeliefert werden.