ವರ್ತಮಾನದ ಸಾಹಿತ್ಯಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾಳಜಿಗೆ ಸ್ಪಂದಿಸುವ ಕಾದಂಬರಿ 'ಶಿಕಾರಿ'. ಚಿತ್ತಾಲರ ಈ ಕಾದಂಬರಿಯ ಬೀಸು ದೊಡ್ಡದು. 'ಶಿಕಾರಿ'ಯು ಒಂದಕ್ಕಿಂತ ಹೆಚ್ಚು ಸಂವೇದನಾ ಕೇಂದ್ರಗಳಿರುವ ಕಾದಂಬರಿ. ಮನುಷ್ಯನಲ್ಲಿ ಕಾಣಿಸುವ ಮತ್ತೊಬ್ಬನನ್ನು ಸಹಿಸಿಕೊಳ್ಳದಂತಹ ಅಹಂ, ಭಯ, ಆತಂಕಗಳನ್ನು ಕಾದಂಬರಿಯು ಚಿತ್ರಿಸುತ್ತದೆ. ಸಮಾಜದಲ್ಲಿ ಮನೆ ಮಾಡಿರುವ ಜಾತಿವ್ಯವಸ್ಥೆ, ಅನಿವಾರ್ಯ ಸಂಬಂಧಗಳು, ಮನುಷ್ಯನ ಜ್ಞಾನದ ಫಲವಾದ ಸಾಧನೆಗಳನ್ನು ಸ್ವಾರ್ಥಕ್ಕೆ, ರಾಜಕಾರಣಕ್ಕೆ ಬಳಸಿಕೊಳ್ಳುವುದು, ಎದುರಾಳಿಯ ಮುರಿಯಲು-ಹಣಿಯಲು ಬಳಸುವುದು - ಹೀಗೆ ಹಲವು ಸಂಗತಿಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ಕಾದಂಬರಿಯುದ್ದಕ್ಕೂ ಘಟನೆ, ಪ್ರತಿಭಟನೆ, ಅದಕ್ಕೊಂದು ಕಥೆ, ಧ್ವನಿ, ಸಂವೇದನೆಯಾಗಿ ಮೂಡಿ ಬಂದಿದೆ. ಹಿರಿಯ ಲೇಖಕ-ಪತ್ರಕರ್ತ ಜಿ.ಎನ್. ರಂಗನಾಥರಾವ್ ಅವರು 'ಶಿಕಾರಿ' ಕುರಿತು 'ಕಾದಂಬರಿಗೆ ಸಹಜವೆನಿಸುವ ವಿಸ್ತಾರ, ಘಟನಾಬದ್ಧವಾದ ಕಥೆಯ ಭದ್ರ ಅಸ್ತಿಭಾರ, ನಾಯಕನ ಜ್ವಲಿಸುವ ಪ್ರಜ್ಞೆಯ ಹಿಲಾಲಿನ ಬೆಳಕಿನಲ್ಲಿ ಗೋಚರಿಸುವ, ಸಾಮಾಜಿಕವಾಗಿ ಬಾಧಿಸುವಂಥ ವಿದ್ಯಮಾನಗಳು ಇವುಗಳಿಂದಾಗಿ ಕಾದಂಬರಿ ವಾಚ್ಯಾರ್ಥ ದಾಟಿ ಪಡೆದುಕೊಳ್ಳುವ ಅರ್ಥಾಂತರ ಮೊದಲಾದ ಕಾರಣಗಳಿಂದ ಶಿಕಾರಿ ಮಾನವಶಾಸ್ತ್ರ, ಸಮಾಜಶಾಸ್ತ್ರ, ಮನಶ್ಯಾಸ್ತ್ರ ಇತ್ಯಾದಿ ಹಲವು ನಿಟ್ಟಿನ ಅಧ್ಯಯನಕ್ಕೆ ಮೌಲ್ಯ ನಿಷ್ಕರ್ಷೆಗೆ ಅರ್ಹವಾದ ಕೃತಿಯಾಗಿದೆ' ಎಂದು ವಿಶ್ಲೇಷಿಸಿದ್ದಾರೆ.
Dieser Download kann aus rechtlichen Gründen nur mit Rechnungsadresse in A, D ausgeliefert werden.