ಹನ್ನೆರಡನೆಯ ಶತಮಾನದಲ್ಲಿ ಕನ್ನಡ ನಾಡಿನಲ್ಲಿ ನಡೆದ ವಚನ ಚಳವಳಿಯನ್ನು ಕೇಂದ್ರವಾಗಿಟ್ಟು ರಚನೆಯಾದ ನಾಟಕ. ವಚನ ಚಳುವಳಿಯ ನೇತಾರ ಬಸವಣ್ಣ. ಬಸವಣ್ಣ ಮಾಡಿದ ಪವಾಡ ಜೋಳ ಮುತ್ತಾದದ್ದಲ್ಲ. ದುಡಿಯುವ ಜನರನ್ನು ಒಳಗೊಂಡ ಕಾಯಕ ಜೀವಿಗಳನ್ನು ಒಟ್ಟುಗೂಡಿಸಿದ್ದೇ ಪವಾಡ. ಆಳುವ ದೊರೆ ಬಿಜ್ಜಳ ಕೂಡ ಅದನ್ನು ಒಪ್ಪಿಕೊಂಡಿದ್ದಾನೆ. ಬಿಜ್ಜಳ ಮತ್ತು ಬಸವಣ್ಣ ಅವರ ನಡುವಿನ ಸಂಬಂಧವನ್ನು ವಿಭಿನ್ನ ರೀತಿಯಲ್ಲಿ ಕಟ್ಟಿಕೊಡುವ ಈ ನಾಟಕ ಕನ್ನಡ ನಾಡಿನ ಮಹತ್ವದ ಐತಿಹಾಸಿಕ ಘಟನೆಗೆ ನೀಡಿದ ಸೃಜನಾತ್ಮಕ ಸ್ಪಂದನೆಯಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪಾತ್ರವಾಗಿರುವ ಈ ನಾಟಕವು ಓದು-ರಂಗಪಠ್ಯಗಳೆರಡಲ್ಲೂ ಮೆಚ್ಚುಗೆಗೆ ಪಾತ್ರವಾಗಿದೆ. ..... ತಲೆದಂಡದ ನಿಜವಾದ ವಸ್ತು ಸಾಮಾಜಿಕ ಹಾಗೂ ರಾಜಕೀಯ ಕ್ರಾಂತಿ ಹಾಗೂ ಈ ಕ್ರಾಂತಿಯ ವೈಫಲ್ಯದ ಒಂದು ಸ್ಥಿತಿ. ನಿಜವಾದ ಕ್ರಾಂತಿ ಕೊನೆಯಿಲ್ಲದ ಒಂದು ಪ್ರಕ್ರಿಯೆಯಾಗಿರುವುದರಿಂದ ಹಾಗೂ ಅದರ ಪರಿಣಾಮಗಳು ದೂರಗಾಮಿ ಯಾಗಿರುವುದರಿಂದ ಸೋಲು ಅದರ ಒಂದು ಅವಸ್ಥೆಯನ್ನು ಮಾತ್ರ ಸೂಚಿಸುತ್ತದೆ. ತಾನು ಹುಟ್ಟುಹಾಕಿದ ಕ್ರಾಂತಿ ಒಂದಿಲ್ಲೊಂದು ದಿನ ಯಶಸ್ವಿಯಾಗುತ್ತದೆ ಎಂದು ಬಸವಣ್ಣ ನಂಬಿದ್ದಾನೆ. ಒಂದು ದಿವಸ ಈ ವರ್ಣಾಶ್ರಮ ಧರ್ಮ ಈ ಜಾತಿ ವ್ಯವಸ್ಥೆ ಇವೆಲ್ಲ ಅಳಿದು ಹೋಗತಾವ." ಈ ಮಾತು ವೀರಶೈವ ಶರಣರ ಕ್ರಾಂತಿಗೂ ಅನ್ವಯಿಸುವಂಥದು. ನಾಟಕ ಕಾಂತಿಯ ಸ್ವರೂಪ ಹಾಗೂ ಅದರ ಸೋಲು-ಗೆಲುವುಗಳಿಗೆ ಕಾರಣವಾದ ಸಾಮಾಜಿಕ ಹಾಗೂ ರಾಜಕೀಯ ಶಕ್ತಿಗಳ ಶೋಧವಾಗಿರುವುದರಿಂದ ಅದು ಸಾರ್ವತ್ರಿಕ ಪ್ರಸ್ತುತತೆಯನ್ನು ಚಿತ್ರಿಸುತ್ತದೆ.
Dieser Download kann aus rechtlichen Gründen nur mit Rechnungsadresse in A, D ausgeliefert werden.